ಫೆಬ್ರವರಿ 19, 2011

ಇದ್ದರೆ ಇರಬೇಕು...


ಇದ್ದರೆ ಇರಬೇಕು....

ಮನೆಯೊಳಗಾಡುವ ಮಗು...
ಮನದೊಳು ಆಡುವಂತಿರಬೇಕು...
ಮನದೊಳಾಡುವ ಮಗು...
ಮುಂದೊಂದುದಿನ ಜಗದೊಳು...
ಎಲ್ಲರಲ್ಲೊಂದಾಗಿ ಆಡುವಂತಿರಬೇಕು...

ಇದ್ದರೆ ಇರಬೇಕು...

ಮುಗುಳುನಗುವ ತಾಯಿ...
ಎಂದೆಂದೂ ನಗುತಿರಬೇಕು...
ಮಗುವನ್ನು ತನ್ನಿಂದ ಅಗಲಿಸಿಯಾದರೂ...
ಮಗುವಿನ ಭವ್ಯ ಭವಿಷ್ಯಕ್ಕೆ...
ಅಡಿಪಾಯ ಇಡುವಂತಿರಬೇಕು...

ಇದ್ದರೆ ಇರಬೇಕು...

ಎಲ್ಲ ಹೊರೆ ತನ್ನದೆನ್ನುವ ತಂದೆ...
ಎಂದೆಂದೂ ಅಭಿಮಾನದಿಂದಿರಬೇಕು...
ಮಕ್ಕಳ ವಿಜಯದ ಆಧಾರವಾಗಿ...
ಸೋಲಿನಲ್ಲಿ ಬೆನ್ನುತಟ್ಟಿ...
ಜೊತೆನಡೆಯುವ ಗೆಳೆಯನಾಗಿರಬೇಕು...

ಇದ್ದರೆ ಇರಬೇಕು...

ಹೃದಯದಲ್ಲಿರುವ ಬಾಳಸಂಗಾತಿ...
ಮನಸ್ಸನ್ನು ಬೆಚ್ಚಗಿಡುವಂತಿರಬೇಕು...
ಎಂದೆಂದೂ ಜೊತೆ ಇರುವ...
ನಲಿವೆಂದೂ ಸುಳ್ಳಲ್ಲವೆಂದು...
ಸಾಧಿಸುವಂತಹ ನಲ್ಲನಿರಬೇಕು...

ಇದ್ದರೆ ಇರಬೇಕು...

ಜೊತೆಯಲ್ಲಿ ಹುಟ್ಟಿದ ಒಡಹುಟ್ಟಿದವರು... 
ಜೀವನಪೂರ್ತಿ ಒಗ್ಗಟ್ಟಾಗಿರಬೇಕು...
ಒಂದೇ ಸೂರಡಿ ಇರದಿದ್ದರೂ...
ಕೊನೆವರೆಗೂ ಒಂದೆನ್ನುವ...
ಭಾವನೆ ಮನದಲ್ಲಿರಬೇಕು...

ಇದ್ದರೆ ಇರಬೇಕು...

ಹೇಗೋ ಎಲ್ಲೋ ಸಿಕ್ಕ ಗೆಳೆಯರು...
ಹಿಂದಿನ ಜನ್ಮದ ನಂಟಿನಂತಿರಬೇಕು.... 
ಜಗವೆಂಬ ಮಾಯಾ ಜಂಜಾಟದಲಿ....
ನಿನ್ನೆ ಇಂದು ನಾಳೆ ರಾತ್ರೆ ಹಗಲೆನ್ನದೆ...
ಮನದ ಕದವ ತಟ್ಟುತಿರಬೇಕು...

ಇದ್ದರೆ ಇರಬೇಕು...

ಹುಟ್ಟಿನಿಂದ ಹುಟ್ಟಿಕೊಂಡ ಬಂಧುಗಳು....
ನಿಧಾನವಾಗಿಯಾದರೂ ಅರ್ಥವಾಗುವಂತಿರಬೇಕು...
ಅರ್ಥಕ್ಕೆ ಬೆಲೆಕೊಡದೆ...
ಜನರೊಡನೆ ತಾವು ಒಂದು...
ಎಂಬಂತಾಗದ ಸಂಬಂಧಿಕರಿರಬೇಕು...

ಇದ್ದರೆ ಇರಬೇಕು...
ಬದುಕಿರುವ ಕಾಲವೆಲ್ಲಾ...
ಮಲಗಿದಾಗಲೆಲ್ಲಾ...
ಈ ತರಹದ ಸುಂದರ ಕನಸುಗಳೆಲ್ಲಾ...
ಕಾಣುವಂತಿರಬೇಕು...

1 ಕಾಮೆಂಟ್‌:

  1. ಸರಿತ್ಸಾಗರ...

    ಸೊಗಸಾದ ಸಾಲುಗಳು..
    ಎಲ್ಲರೂ ಬಯಸುವಂಥಹ "ಬಂಧಗಳು"

    ಎಲ್ಲವೂ..
    ಇರುತ್ತವೆ..
    ಸಿಗುತ್ತವೆ..
    ಕಾಣುವ ಕಣ್ಣಿರಬೇಕು..
    ನೋಡುವ ನೋಟವಿರಬೇಕು..

    ಬಾವಿಸುವ.. ಭಾವನೆಯಿರಬೇಕು..

    ಅನುಭವಿಸುವ.. ಮನವಿರಬೇಕು..

    ಅಲ್ಲವೆ?

    ಅಭಿನಂದನೆಗಳು..

    ಇನ್ನಷ್ಟು ಬರೆಯಿರಿ...

    ಪ್ರತ್ಯುತ್ತರಅಳಿಸಿ